Tuesday, July 26, 2016

ಬರೆಯಬೇಕೆಂಬಾಸೆ ಸತ್ತಿಲ್ಲ!

1912ರ ನಂತರ ಈ ಬ್ಲಾಗ್‍ನಲ್ಲಿ ನಾನು ಏನನ್ನೂ ಬರೆದಿಲ್ಲ. ಮೊದಲ ಎರಡೂ ಬರಹಗಳಲ್ಲಿ ನಾನು ಓದಿದ ಪುಸ್ತಕಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ದಾಖಲಿಸಿದ್ದೇನೆ. ಆ ಮೇಲಿನ ನಾಲ್ಕು ವರ್ಷಗಳಲ್ಲಿ ಹಲವು ಆತ್ಮಕತೆಗಳನ್ನೂ, ಕತೆ ಕಾದಂಬರಿಗಳನ್ನೂ ನೋಡಿದ್ದೇನೆ, ಓದಿದ್ದೇನೆ. ನನ್ನ ಓದಿನ ಬಹುಪಾಲು ಕನ್ನಡಕ್ಕೇ ಮೀಸಲಾಗಿದ್ದರೂ, ಇಂಗ್ಲೀಷನ್ನು ಸಂಪೂರ್ಣ ಬಿಟ್ಟಿಲ್ಲ. ದೈನಂದಿನ ಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆ (ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಗಳಲ್ಲಿ)ಗಳೇ ಹೆಚ್ಚಿನ ಸಮಯವನ್ನು ಕಬಳಿಸಿದರೂ, ಅವುಗಳಿಂದಲೇ ಸಂಪೂರ್ಣ ತೃಪ್ತನಾಗುವುದಿಲ್ಲ. ಇಷ್ಟಲ್ಲದೆ ಅಂತರ್ಜಾಲದಲ್ಲಿ ಜಾಲಾಡುವ ಹವ್ಯಾಸವೊ, ಅಭ್ಯಾಸವೊ, ಚಟವೊ- ಅದು ಕೂಡಾ ಅಂಟಿಕೊಂಡಿರುವುದರಿಂದ, ಆ ಬ್ರಹ್ಮಾಂಡದ ಒಳಸೇರಿದರೆ ಬೇಗನೇ ಹೊರಬರಲಾಗುವುದಿಲ್ಲ. ಆಲ್ಲಿಯೂ ಸಾಕಷ್ಟು ಮೇವು ಸಿಗುತ್ತದೆ. ಕನ್ನಡದಲ್ಲಿಯೂ ಹಲವು ಉತ್ತಮ ಬ್ಲಾಗ್‍ಗಳಿವೆ; ಯುವ ಬರಹಗಾರರಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಓದಿದ ಪುಸ್ತಕಗಳ ಬಗ್ಗೆ ಯಾವುದೇ ಟಿಪ್ಪಣಿ ಮಾಡಿಕೊಂಡಿರುವುದಿಲ್ಲ. ಆದುದರಿಂದ ಆ ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ದಿನಗಳಲ್ಲಿ ಬರೆಯುತ್ತೇನೆ.

No comments:

Post a Comment